ವೈಶಿಷ್ಟ್ಯವಾಗಿರುವುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ಲ್ಯಾಸ್ಟಿಕ್ ಸುಟ್ಟರೆ ಬೂದಿ ಸಿಗೋದಿಲ್ಲ ಯಾಕ್ ಗೊತ್ತಾ?!
ವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ಅನೇಕ ಕೌತುಕದ ಕಾರಣಗಳು ಅಡಗಿರುತ್ತವೆ. ವಿಜ್ಞಾನದ ಅಚ್ಚರಿಗಳ ಹಿಂದಿನ ಕಾರಣ ಹುಡುಕಿದರೆ ಹೆಚ್ಚಿನವುಗಳಿಗೆ ಕಾರಣಗಳು ಸಿಕ್ಕುತ್ತವೆ. ಕೆಲವೊಂದು ಜಟಿಲ ಸಂಗತಿಗಳಿಗೆ ಕಾರಣ ಹುಡುಕೋದು ಸುಲಭವಿಲ್ಲ. ಆದರೆ ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ಹಲವಾರು ವಿಜ್ಞಾನದ ಸಂಗತಿಗಳ ಹಿಂದಿನ ಕಾರಣವನ್ನು ನಾವು ತಿಳಿದುಕೊಳ್ಳಬಹುದು.
ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಹಲವಾರು ವಿಜ್ಞಾನದ ವಿಚಾರಗಳಿಗೆ ನಾವು ಕಾರಣ ಹುಡುಕಲು ಹೋಗುವುದಿಲ್ಲ. ಹೆಚ್ಚಿನವರಿಗೆ ವಿಜ್ಞಾನದ ಅಚ್ಚರಿಗಳ ಹಿಂದಿನ ಕಾರಣ ತಿಳಿದುಕೊಳ್ಳುವ ಕುತೂಹಲವೇ ಇರುವುದಿಲ್ಲ. ಆದರೆ ನಮ್ಮ ಸುತ್ತಮುತ್ತಲು ನಡೆಯುವ ವಿಜ್ಞಾನದ ಸಂಗತಿಗಳ ಬಗ್ಗೆ ನಾವು ಕುತೂಹಲ ಬೆಳೆಸಿಕೊಂಡರೆ ವಿಜ್ಞಾನದಯೆಡೆಗಿನ ನಮ್ಮ ಜ್ಞಾನ ಇನ್ನೂ ಚುರುಕುಗೊಳ್ಳುತ್ತವೆ. ಹೀಗಾಗಿ ನಮ್ಮ ಜೀವನದ ಭಾಗವೇ ಆಗಿರುವ ವಿಜ್ಞಾನದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ‘ಕಲಾವಿಹಾರ’ ಮಾಡಲಿದೆ. ಹಾಗಾದರೆ ಬನ್ನಿ, ನಮ್ಮ ದಿನನಿತ್ಯದ ಬದುಕಿನಲ್ಲಿ ಕಾಣ ಸಿಗುವ ಒಂದು ವಿಜ್ಞಾನದ ವಿಚಾರದ ಬಗ್ಗೆ ಇವತ್ತು ಮಾಹಿತಿ ತಿಳಿದುಕೊಳ್ಳೋಣ.
ಸೌದೆ ಒಲೆ ಉರಿಸುವ ಮುನ್ನ ಸೌದೆಗೆ ಬೆಂಕಿ ಹತ್ತಿಕೊಳ್ಳಲು ನಾವು ಒಣಗಿದ ಸೊಪ್ಪು, ಪೇಪರ್ ಅಥವಾ ಬೇಡದ ಪ್ಲ್ಯಾಸ್ಟಿಕ್ ಗೆ ಮೊದಲು ಬೆಂಕಿ ಉರಿಸಿ ಅದರ ಮೂಲಕ ಕಟ್ಟಿಗೆ ಉರಿಯುವಂತೆ ನೋಡಿಕೊಳ್ಳುತ್ತೇವೆ. ಪೇಪರ್, ಸೊಪ್ಪು, ಮರದ ತುಂಡು ಉರಿದ ಬಳಿಕ ಆ ಜಾಗದಲ್ಲಿ ಬೂದಿ ನಮಗೆ ಕಾಣಿಸುತ್ತದೆ. ಆದರೆ ಪ್ಲ್ಯಾಸ್ಟಿಕ್ ಉರಿದ ಜಾಗದಲ್ಲಿ ನಮಗೆ ಬೂದಿಯೇ ಕಾಣಿಸುವುದಿಲ್ಲ. ಇದು ಯಾಕೆಂದು ಯಾವತ್ತಾದರೂ ಯೋಚಿಸಿದ್ದೀರಾ?
ಪ್ಲ್ಯಾಸ್ಟಿಕ್ ಸುಟ್ಟ ಬಳಿಕ ಆ ಜಾಗದಲ್ಲಿ ಬೂದಿ ಉಳಿಯದಿರುವುದಕ್ಕೆ ಒಂದು ವಿಜ್ಞಾನದ ಕಾರಣವಿದೆ. ಪ್ಲ್ಯಾಸ್ಟಿಕ್ ಚೀಲಗಳನ್ನು ಪಾಲಿಎಥಿಲಿನ್ ಎಂಬ ರಾಸಾಯನಿಕ ಸಂಯುಕ್ತದಿಂದ ತಯಾರಿಸುತ್ತಾರೆ. ಈ ಪಾಲಿಎಥಿಲಿನ್ ರಾಸಾಯನಿಕ ಹೈಡ್ರೋಕಾರ್ಬನ್ ಅನ್ನು ಒಳಗೊಂಡಿರುತ್ತದೆ. ಹೀಗಾಗಿ ಪ್ಲ್ಯಾಸ್ಟಿಕ್ ಉರಿದಾಗ ಅದು ಪೂರ್ತಿಯಾಗಿ ಇಂಗಾಲದ ಡೈಆಕ್ಸೈಡ್ ಅನಿಲ ಮತ್ತು ನೀರಿನ ಬಾಷ್ಪವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಪ್ಲ್ಯಾಸ್ಟಿಕ್ ಗಳು ಸುಟ್ಟಾಗ ಆ ಜಾಗದಲ್ಲಿ ಶೇಷ, ಅಂದರೆ ಬೂದಿ ನಮಗೆ ಕಾಣಸಿಗುವುದಿಲ್ಲ.
ಪೇಪರ್ ಅಥವಾ ಮರದಂತಹ ವಸ್ತುಗಳಲ್ಲಿ ಸೆಲ್ಯುಲೋಸ್ ಅಂದರೆ ಬೆಂಕಿ ಉರಿಯೋಕೆ ಅನುಕೂಲವಾದ ಇಂಗಾಲ, ಜಲಜನಕ ಮತ್ತು ಆಮ್ಲಜನಕಗಳ ಸಂಯುಕ್ತ ವಸ್ತು ಮತ್ತು ಜಟಿಲ ಸಾವಯವ ವಸ್ತು ಲಿಗ್ನಿನ್ ಇರುತ್ತದೆ. ಈ ಲಿಗ್ನಿನ್ ಬೆಂಕಿಯೊಂದಿಗೆ ಪೂರ್ತಿಯಾಗಿ ಉರಿದು ಹೋಗೋದಿಲ್ಲ. ಬೆಂಕಿ ಹಚ್ಚಿದ ಮರದಂತಹ ವಸ್ತುಗಳಲ್ಲಿ ಬೂದಿಯಾಗಿ ಉಳಿಯುವ ಅಂಶವೇ ದಹಿಸಿದ ಲಿಗ್ನಿನ್.
ಹಾಗಂತ ಕೆಲವು ಪ್ಲ್ಯಾಸ್ಟಿಕ್ ಗಳನ್ನು ಪಾಲಿಎಥಿಲಿನ್ ಅಲ್ಲದೆ ಕೆಲವು ಘನ ಸಂಯುಕ್ತಗಳನ್ನು ಸೇರಿಸಿ ತಯಾರಿಸುತ್ತಾರೆ. ಅಂಥವುಗಳಲ್ಲಿ ಸ್ವಲ್ಪ ಪ್ರಮಾಣದ ಬೂದಿ ಉಳಿದುಕೊಳ್ಳಬಹುದು. ಆದರೆ ಸಾಮಾನ್ಯ ಪ್ಲ್ಯಾಸ್ಟಿಕ್ ಚೀಲಗಳನ್ನು ಸುಟ್ಟಾಗ ಬೂದಿ ಕಾಣಸಿಗುವುದಿಲ್ಲ. ಪ್ಲ್ಯಾಸ್ಟಿಕ್ ಸುಟ್ಟಾಗ ಬೆಂಕಿಯೊಂದಿಗೆ ಬೂದಿಯೂ ಮಾಯವಾಗುವುದರ ಹಿಂದಿನ ಗುಟ್ಟಿದು.
-ಸದಾ ಸಕಲೇಶಪುರ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಪ್ರಚಲಿತ ಪೋಸ್ಟ್‌ಗಳು
ನಿಸರ್ಗವೇ ಬಿಡಿಸೋ ಅಚ್ಚರಿಯ ಶಿಲ್ಪ ಈ ಸ್ಟಾಲಕ್ಟೈಟ್, ಸ್ಟಾಲಗ್ಮೈಟ್!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮನುಷ್ಯರ ಮುಖ ಹೋಲೋ ಈ ಮೀನಿನ ಹೆಸರು ಬ್ಲಾಬ್ಫಿಶ್ (ಈ ಜಗ-ಸೋಜಿಗ!)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
In mini roulette, the wheel is smaller and only options numbers a lot as} 12, nicely as|in addition to} a single “0”. There’s additionally an additional rule, which sees half a player’s wager returned if the ball lands on “0”. The croupier normally starts the wheel spinning in a counterclockwise course and then spins a small ivory or plastic ball onto the bowl’s back monitor in reverse direction|the other way|the incorrect way}. In roulette, you have to to|you must} anticipate the number or kind of pocket on which the ivory ball goes to land. To do this, 카지노사이트 there are a selection of bets you can also make|you may make}."Inside" bets, or bets placed on specific numbers, usually have larger paying odds.
ಪ್ರತ್ಯುತ್ತರಅಳಿಸಿ